Posts

Showing posts from May, 2026

ಒಲವ ಹಲವು ಮುಖಗಳು_1

Image
  ಒಲವ ಹಲವು ಮುಖಗಳು ಈ ಜಗತ್ತು ನಮಗೆ ಹಲವಾರು ವಿಭಿನ್ನವಾದ ಒಲವ ದಂತಕಥೆಗಳನ್ನು ಹೇಳುತ್ತದೆ.ಅದು ಕಾಲ್ಪನಿಕವೂ ಇರಬಹುದು, ವಾಸ್ತವದಲಿ ನಡೆದಿರುವ ಘಟನೆಗಳೂ ಆಗಿರಬಹುದು.ಬದುಕಿನಲ್ಲಿ ಪ್ರೀತಿ ಸಿಂಗಾರಗೊಂಡು ಮೆರೆಯತೊಡಗಿದರೆ ಆ ಚಂದನೇ ಬೇರೆ. ಪ್ರೀತಿಯೇ ಬದುಕಲ್ಲ ನಿಜ. ಆದರೆ ಬದುಕಿನಲ್ಲಿ ಪ್ರೀತಿ ಇದ್ದರೆ ಬದುಕಿನ ಬಣ್ಣಗಳೇ ಬದಲಾಗಿ ಬದುಕು ರಮ್ಯ ಚೖತ್ರಕಾಲವಾಗಿರುತ್ತದೆ.ಆದರೆ ಈ ಪ್ರೀತಿ ಇಲ್ಲಿ ಶುದ್ದವಾಗಿರಬೇಕು. ಇಲ್ಲವಾದರೆ ಬದುಕು ಬಣ್ಣ ಕಳೆದುಕೊಂಡು ಸಪ್ಪೆಯಾಗಬಹುದು. ಈ "ಪ್ರೀತಿ ಪ್ರೇಮ" ಎಲ್ಲ ಕಥೆಗಳಲ್ಲಿ ಓದೋಕೆ ಚೆನ್ನಾಗಿರುತ್ತದೆ. ವಾಸ್ತವದ ಬದುಕಿನಲ್ಲಿ ಬರಿಯ ನರಕದರ್ಶನವೇ ಎನುವುದು ಕೆಲವರ ವಾದ. ಇದೇ ಪ್ರೀತಿಯನ್ನು ಕೆಲವರು ಸ್ವರ್ಗಕ್ಕೂ ಹೋಲಿಸುತ್ತಾರೆ. ಇಲ್ಲಿ ಯಾವುದು ಸರಿ, ಯಾವುದು ತಪ್ಪು? ಇದು ಅವರವರ ಭಾವಕ್ಕೆ ಸರಿಯಾಗಿ ಬದಲಾಗೋ ವಿಷಯನಾ? ಅಥವಾ ಅವರವರ ಬದುಕಿನ ಅನುಭವಕ್ಕೆ ಸೀಮಿತವಾದ ವಿಷಯನಾ? ಇಲ್ಲಿ ಎರಡೂ ನಿಜ. ಪ್ರೀತಿ ಭಾವ ಹಾಗೂ ಬದುಕಿಗೆ ಅಂಟಿದ ನಂಟು.ಅದನ್ನು ಕೇವಲ ಒಂದು ಭಾವವೆಂದುಕೊಂಡರೆ ಅದು ಭಾವವಷ್ಟೆ. ಬದುಕೆಂದುಕೊಂಡರೆ ಅದು ಬದುಕು. ಪ್ರೀತಿ ಆಕರ್ಷಣೆಯಲ್ಲ, ಮೋಹವಲ್ಲ, ಅನುರಾಗವಲ್ಲ, ಅನುಕಂಪವೂ ಅಲ್ಲ. ಪ್ರೀತಿ ಕೇವಲ ಪ್ರೀತಿಯಷ್ಟೆ. ಅದು ಎಂದಿಗೂ ಪರಿಶುದ್ದ. ಪ್ರೀತಿ ಖಂಡಿತ ಒಂದು ಸಂಬಂಧವಲ್ಲ.ನಿಜವಾದ ಪ್ರೀತಿ ಎನ್ನುವುದು ಜೀವ ಜೀವನವನ್ನೆ ಬೆಸೆಯುವ ಒಂದು ನವಿರಾದ ಬಂಧನ.ಅದು ಬಿಗಿಯಾದರೆ ಕ...
Image
  ಹೆಣ್ಣೆಂದರೆ ಈ ಭೂಮಿ ಮೇಲೆ ಹೆಣ್ಣಾಗಿ ಹಲವು ಜಗವನ್ನು ಮೆಚ್ಚಿಸುವುದು ಕಷ್ಟದ ಕೆಲಸ. ಆಕೆ ಹೇಗಿದ್ದರೂ ಒಡಕು ಹುಡುಕುವ ಜಗವನ್ನು ಹೇಗೆ ಮೆಚ್ಚಿಸುವಳು ಅವಳು? ಆದರೆ ಜಗವನ್ನು ಮೆಚ್ಚಿಸೋದೇ ಬದುಕು ಅಂದವರು ಯಾರು?ಬದುಕು ನಮ್ಮಿಷ್ಟದಂತೆ ಬಾಳೋದು ಯಾಕಾಗಬಾರದು? ಇಷ್ಟ ಅಂದ ತಕ್ಷಣ ಸ್ವೇಚ್ಛೆ ಅಲ್ಲ. ಮನಸಾಕ್ಷಿಯ ತಕ್ಕಡಿಯಲಿ ಧರ್ಮ, ನ್ಯಾಯ, ಸತ್ಯದ ಕಡೆ ಇರುವ ವಿಚಾರಗಳು. ಸ್ವತಂತ್ರ, ದಿಟ್ಟ, ನೖತಿಕ ನಿರ್ಧಾರಗಳು. ಸೋಲಿಗಂಜದೆ, ಅನ್ಯಾಯದ ಮನೆಯ ಹೊಸಿಲು ತುಳಿಯದೆ ಧರ್ಮದ ಹಾದಿಯಲ್ಲಿನ ನಿರಂತರ ಪಯಣ.ಕಷ್ಟಗಳ ಕಲ್ಲು ಮುಳ್ಳಿನ ನಡುವೆ ಇಷ್ಟವಾಗಿ ನಡೆಯೋದು... ಈ ಬದುಕನ್ನು ಜಗವು ಮೆಚ್ಚುವುದೇ. ಗೆದ್ದರೆ ಖಂಡಿತ ಮೆಚ್ಚುವುದು.. ಹಾಗೆಯೇ ಸೋತರೆ ಚುಚ್ಚುವುದು... ಶೀರ್ಷಿಕೆ :ಹೆಣ್ಣೆಂದರೆ..... ಆಕೆ ಸೀತೆಯಾದರೆ ಅಪವಾದ ಹೊರಿಸಿ ವನವಾಸಕ್ಕೆಅಟ್ಟುವುದು ಈ ಸಮಾಜ ಒಂದು ವೇಳೆ ಅವಳು ರಾಧೆಯಾದರೆ ಪ್ರೀತಿಯನ್ನು ಕಸಿದು ಬದುಕೆಲ್ಲ ವಿರಹದ ಸಜ ಆಕೆ ದ್ರೌಪದಿಯಾದರೆ, ಮಾಡುವರು ತುಂಬ ಸಭೆಯಲಿ ಅವಮಾನ ಸತಿಯಾಗಿ ಅನುಭವಿಸಿದಳು  ತಂದೆಯಿಂದಲೆ ತನ್ನ ಪತಿಗೆ ಅವಮಾನ ಆಕೆ ಕೇವಲ ಹೆಣ್ಣೆಂಬ ಕಾರಣಕೆ ಕೆಣಕಿ ಕೆದಕಿ ಹುಡುಕುವರು ಒಡಕು. ಆಕೆ ಅದೆಷ್ಟು ನೆಟ್ಟಗಿದ್ದರೂ ಸೊಟ್ಟಗಿರುವ ಸಮಾಜ ಅವಳಲ್ಲಿ ಹುಡುಕುವುದು ಬರಿ ತೊಡಕು ಅವಳಂದವಿದ್ದರೂ ತಪ್ಪು, ಕುರುಪಿಯಾದರೂ ತಪ್ಪು  ವಿದ್ಯೆಯಿದ್ದರೆ ಸೊಕ್ಕು, ಪೆದ್ದಿಯಾದರೆ ಯಾರು ದಿಕ್ಕು? ಹೊರಗಡಿಯಿಟ್ಟರೆ ಅ...

ಪ್ರೀತಿ ನೀ ಹುಟ್ಟೋದೆಲ್ಲಿ

Image
  ಹೇಳು ನೀ ಯಾರು ನನಗೆ?. … . ಒಲವು.. ಪ್ರತಿ ಮನದ ಮನೆಯ ಅತಿಥಿ.. ಕಣ್ಣ ಸನ್ನೆಯ ಸಲಿಗೆಯಲೆ ಬದುಕನ್ನೆ ಸುಲಿಗೆ ಮಾಡುವ ಅಪರಿಚಿತ ಆಗಂತುಕ. ಕನಸುಗಳ ಸುರಿದು ಭಾವಗಳ ದೋಚಿ, ಜೀವ ಜೀವನಕ್ಕಂಟುವ ನಂಟು ಪ್ರೀತಿ.

ಕನಸು ಮನಸಿನ ನಡುವಿನ ಶೀತಲ ಸಮರಗಳು...

Image
ಬದುಕ ನಿಶೆಯೊಳಗಿನಿಂದ....... ಕನಸು ಮನಸಿನ ನಡುವಿನ ಶೀತಲ  ಸಮರಗಳು ಮನುಷ್ಯನ ಬದುಕು,ಏರಿಳಿತಗಳ ದಾರಿಯಲ್ಲಿ ಸಾಗುವ ಒಂದು ಪಯಣ.ಅಲ್ಲಲ್ಲಿ ಕಾಣಸಿಗುವ ಅಪರಿಚಿತ ಕೆಲವು ಸಂಗತಿಗಳಿಬಹುದು,ವಿಚಿತ್ರ ಅನುಭವಗಳು, ನೋವು, ದುಃಖ, ನಲಿವು ಗೆಲುವು,ಹೀಗೆಯೇ ಹತ್ತು ಹಲವು ಏರಿಳಿತಗಳ ನಡುವೆ ಸಾಗುವ ಬದುಕಿನ ಪಯಣದಲ್ಲಿ ಶೀತಲ ಸಮರಗಳು ಸಮರಗಳು ಸರ್ವೆ ಸಾಮಾನ್ಯ.ಇದು ಎರಡು ವ್ಯಕ್ತಿಗಳ ಮಧ್ಯೆಯೂ ಇರಬಹುದು.ಅಥವಾ ಒಂದು ವ್ಯಕ್ತಿ ಮತ್ತು ಅವನ ವ್ಯಕ್ತಿತ್ವದ ನಡುವೆಯೂ ಇರಬಹುದು.ಬದುಕು ಹಲವಾರು ಏರಿಳಿತಗಳೊಂದಿಗೆ ಸಾಗುವಾಗ ಬದುಕಿನ ಸಮತೋಲನದಲ್ಲಿ ಏರುಪೇರಾಗಿ ಮನಸಿನ ಸಾಮರಸ್ಯಕ್ಕೆ ಕೊರತೆಯಾಗುತ್ತದೆ.ನಿಜವೇನೆಂದರೆ ಎಲ್ಲರ ಬದುಕು ಹೀಗೆಯೇ.ಆದರೆ ಇದು ಹೊರ ಪ್ರಪಂಚದ ಬೆಳಕಿಗೆ ಕಾಣದೆ ಪ್ರತಿ ಮನುಷ್ಯನ ಮನದೊಳಗೆ ರಹಸ್ಯವಾಗಿರುತ್ತದೆ. ಈ ಜಗತ್ತಲ್ಲಿ ಪ್ರತಿಯೊಬ್ಬ ಮನುಷ್ಯನು ಹಲವಾರು ಬಿಚ್ಚಿಡಲಾಗದಂತಹ ರಹಸ್ಯಗಳನ್ನು ಮನದ ಕತ್ತಲೆಯ ಕೋಣೆಯಲ್ಲಿ ಬಚ್ಚಿಟ್ಟುಕೊಂಡಿರುತ್ತಾನೆ.ಇದಕ್ಕೆ ಕಾರಣ ಹಲವಾರು ಪರಿಸ್ಥಿತಿಗಳಾದರೂ ಪರಿಣಾಮ ಮಾತ್ರ ಅವನ ಬದುಕಿನ ನೆಮ್ಮದಿಯ ಮೇಲೆ ಬೀರುತ್ತದೆ.ಈ ಕಳೆದುಕೊಂಡ ನೆಮ್ಮದಿಯ ಭರ್ತಿ ಮಾಡುವ ಸಾಧನ "ನಮ್ಮನ್ನು ನಾವು ಮಾಡಿಕೊಳ್ಳುವ ಸಮಾಧಾನ" ಮಾತ್ರ. ನಮ್ಮ ಜನ ಹೇಗಂದ್ರೆ ,ಅವರಿಗೆ ಅವರ ಬದುಕಿನ ನೋವು ಸಮಸ್ಯೆಗಳಿಗಿಂತ ಇತರರ ಬದುಕಿನ ಆಗುಹೋಗುಗಳ ಬಗ್ಗೆಯೇ ಹೆಚ್ಟು ಕುತೂಹಲ.ಅನ್ಯರ ಬಗ್ಗೆ ಸಣ್ಣ ಸುದ್ದಿ ಸಿಕ್ಕರೆ ಸಾಕು,...

ಸಾರ ಕಳೆದುಕೊಳ್ಳುತಿರುವ ಸಂಸಾರ

Image
ಬದುಕ  ನಿಶೆಯೊಳಗಿನಿಂದ..... ಈ ಜಗದಲ್ಲಿ "ಸಂಸಾರ "ಅಂದಾಗ ಎಲ್ಲರೂ ಮೊದಲು ಬೊಟ್ಟು ಮಾಡಿ ತೋರಿಸುವುದು ಹೆಣ್ಣಿನ ಕಡೆಗೆ. ಯಾಕೆಂದರೆ ಸಮಾಜದ ಪ್ರಕಾರ ಸಂಸಾರದ ಸೂತ್ರವನ್ನು ಹಿಡಿದವಳು ಆಕೆಯೇ.ಅದೊಂದು ಕಾಲದಲ್ಲಿ ಇದು ನಿಜವಾಗಿತ್ತು.ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಅವಳ ಬದುಕು ಮನೆಯ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿತ್ತು. ಹಾಗಾಗಿ ಅವಳು ಮನೆ ಹಾಗೂ ಮನೆಯವರ ಮನದ ಮೂಲೆ ಮೂಲೆಗಳನ್ನು ಬಲ್ಲವಳಾಗಿದ್ದಳು.ಮನೆ ಹಾಗೂ ಸಂಸಾರದ ಪೂರ್ತಿ ಹೊಣೆಗಾರಳು ಅವಳೇ ಆಗಿದ್ದರಿಂದ ಸಂಸಾರ ಸಾರ ಕಳೆದುಕೊಂಡರೆ ಅದಕ್ಕೆ ಕಾರಣ ಅವಳೇ ಎಂದು ಜಗತ್ತು ಅವಳನ್ನು ದೂಷಿಸುತಿತ್ತು. ಇದು ತಲೆತಲಾಂತರದಿಂದ ಕೇಳಿಕೊಂಡು ಬಂದಿರುವ ಮಾತುಗಳು.ಅದಲ್ಲದೆ ಈ ಜಗತ್ತಿನಲ್ಲಿ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವವರಿಗಿಂತ,ಸ್ವಲ್ಪ ಜಾಗ ಸಿಕ್ಕರೆ ಅದನ್ನು ಬೆರೆಯವರ ತಲೆ ಮೇಲೆ ಹಾಕಿ ಜಾರಿಕೊಳ್ಳುವವರೆ ಹೆಚ್ಟು. ಅದರಲ್ಲೂ ಅನಿಷ್ಟಕ್ಕೆಲ್ಲ ಶನೀಶ್ವರನೆ ಹೊಣೆ ಅನ್ನೋ ಹಾಗೆ ,ಹೆಣ್ಣು ಯಾವುದೇ ಒಂದು ಪ್ರಕರಣದ ಸಣ್ಣ ಭಾಗವಾಗಿದ್ದರೂ ಆಕೆಯ ಮೇಲೆ ಅಪವಾದ ಬರುವುದು ಸಹಜವಾಗಿತ್ತು. ಇದಕ್ಕೆ ಒತ್ತು ಕೊಡುವಂತೆ "ಹೆಣ್ಣಿಗೆ ಹೆಣ್ಣೇ ಶತ್ರು " ಎಂಬುದನ್ನು ರುಜುವಾತು ಮಾಡಲೆಂದೆ ಜಗದ ತುಂಬ ಕಾಣಸಿಗುವಂತ ಅತ್ತೆ ಸೊಸೆ ವೈಶಮ್ಯ ಒಂದು ಮನೆಯ ನೆಮ್ಮದಿಯನ್ನು ಕೆಡಿಸುತಿತ್ತು. ಅತ್ತೆಯಾಗಲಿ ಸೊಸೆಯಾಗಲಿ ಇದು ಕೇವಲ ಹೆಣ್ಣಿನ ಜೀವನದ ಒಂದು ಪಾತ್ರವಷ್ಟೆ.ತಾಯಿಯಾಗಿ ...

ಭಾವಗಳ ಬಚ್ಚಿಟವನು...

Image
  ಬದುಕ ನಿಶೆಯೊಳಗಿನಿಂದ ಅಧ್ಯಾಯ_3 ಈ ಜಗದಲ್ಲಿ ಹೆಣ್ಣು ಹಾಗೂ ಗಂಡು ಇಬ್ಬರೂ ಹಲವಾರು ಪಾತ್ರಗಳ ಮೂಲಕ ಬದುಕ ಸವೆಸುವವರು.ಇಬ್ಬರ ಬದುಕಿನ ಎಲ್ಲ ಪಾತ್ರಗಳು ಸಮಾಜದ ಅವಿಭಾಜ್ಯ ಅಂಗಗಳೆ.ಅಪ್ಪ ಅಮ್ಮ ಅಕ್ಕ ತಮ್ಮ ಗಂಡ ಹೆಂಡತಿ ಮಗ ಮಗಳು ಅತ್ತೆ ಮಾವ  ಹೀಗೆ ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ತೂಕವಿದೆ.ಈ ಸಮಾಜದಲ್ಲಿ  ಬಹುತೇಕವಾಗಿ ಎಲ್ಲರೂ ಹೆಣ್ಣಿನ  ಪಾತ್ರವನ್ನು  ಶ್ರೇಷ್ಠ ವೆಂದು ಮೆರೆಸಿ ಗಂಡಿನ ಪಾತ್ರ ವನ್ನು ಮರೆಯಲ್ಲಿಟ್ಟರು.ಈ ಜಗದಲ್ಲಿ ಹೆಣ್ಣು ಕರಗೋ ಮಂಜಾದರೆ ಗಂಡಿನ ಮನ ಗಟ್ಟಿ ಶಿಲೆಯೆಂಬ ಮಾತಿದೆ. ಹೆಣ್ಣಿನ ಬದುಕಿಗೆ ಬೆಸೆದಿರುವ ಗಂಡಿನ ಪಾತ್ರದ ವಿಶೇಷತೆ ಈ ಜಗತ್ತಿನ ಕಣ್ಣಿಗೇಕೆ ಕಾಣುತಿಲ್ಲ.ಈ ಪ್ರಪಂಚದಲ್ಲಿ ಬಹುತೇಕವಾಗಿ ಯಾವದೇ ವಿಷಯದಲ್ಲಾಗಲಿ ಹೋಲಿಕೆ ತಾರತಮ್ಯ ಇವೆಲ್ಲ ಸಾಮಾನ್ಯ.ಆದರೆ ಕೆಲವೊಂದು ಅಸಮನತೆಗಳು ತಾರತಮ್ಯಗಳು ಬೆಳಕಿಗೆ ಬಾರದೆ ತನ್ನೊಳಗೆ ಮರಗುತ್ತಿದೆ. ಅದರಲ್ಲಿಆ ಜೀವದ ಮನದ ಮರೆಯಲ್ಲಿ ಮರುಗುತಿರುವ ಗಂಡಿನ ಭಾವನೆಗಳು ಕೂಡ ಒಂದಾಗಿದೆ. ತಾಯಿ.... ಎಲ್ಲರಿಗೂ ಪ್ರಿಯವಾದವಳು, ನವಮಾಸ ಹೊತ್ತವಳು, ಗರ್ಭವೇ ಸೀಳುವಂತ ನೋವಿನ ನಡುವೆ ಜನ್ಮ ಇತ್ತವಳು,ಸಾಕಿ ಸಲಹಿದವಳು, ನಿಜ... ಹಾಗದರೆ ಅಪ್ಪ... ಅವಳ ಈ ಪಾತ್ರಕ್ಕೆ  ಸಹಾಯಕ ಮತ್ತು ಪೋಷಕ.ಅಪ್ಪ  ಅಂದರೆ ಆಕಾಶ.ಸಂಸಾರಕ್ಕೆ ಅವನೇ ಹೊದಿಕೆ.ಜಗದಲ್ಲಿ ಅವನು ಹೊಗಳಿಕೆಗೆ ನಿಲುಕದ ಆಕಾಶ.ಬಣ್ಣಿಸಲಸಾದ್ಯವಾದ ತ್ಯಾಗಗಳ ಶಿಖರ. ತನ್ನ ಸಂಸ...

ಮಾತು ಮರೆತವರು..

Image
ಬದುಕ ನಿಶೆಯೊಳಗಿನಿಂದ.. ಅಧ್ಯಾಯ _2 ಮಾತು ಮರೆತವರು.. ಈಗ ನಾವೆಲ್ಲ  ಒಮ್ಮೆ ಕಾಲಚಕ್ರವನ್ನು ಸುಮಾರು ಒಂದು   ಹದಿನೈದು ವರ್ಷ ಹಿಂದೆ ಸರಿಸಿ ನೋಡೋಣ್ವ ?. ವಾವ್..ಎಷ್ಟು ಚೆನ್ನಾಗಿತ್ತು ಅಲ್ವ?ಆ ಕಾಲ ನೆನಪಿಗೆ ಬಂದರೆ ಒಂಥರಾ ರೋಮಾಂಚನ. ಆ ಜನಜೀವನ,ಪ್ರಕೃತಿ,ಸಂಸ್ಕೃತಿ,ಸಂಬಂಧ,ಎಲ್ಲವೂ ಆಕಾಶದೆತ್ತರ ಮೆರೆಯುತಿದ್ದ ಒಂದು ಕಾಲ ಅದು.. ಅಲ್ಲಿ ಮನುಷ್ಯನ ಜೀವನಘಟ್ಟಗಳಾದ ಬಾಲ್ಯ ಯೌವ್ವನ ಮುಪ್ಪು ಇವೆಲ್ಲ ಅರಳುವ ಪರಿಯೇ ಬಹಳ ಚಂದವಾಗಿತ್ತು.ಆ ಬದುಕಿಗೆ ಒಂದು ಸುಗಂಧವಿತ್ತು.ಮೊಗ್ಗರಳಿ ಹೂವಾಗಿ ಕಾಯಿ ಹಣ್ಣಾಗಿ ಮತ್ತೆ ಬೀಜ ಮೊಳೆತು ಸಸಿಯಾಗಿ ಜೀವನಚಕ್ರದಲ್ಲಿ ತಿರುತಿರುಗಿ ಚರಿತ್ರೆಯಾಗಿರುವ ಆ ಕಥೆಗಳಿವೆಯಲ್ವ ಅದೇ ನಿಜವಾದ ಬದುಕು.ಆದರೆ ಇಂದು ..?ದಿನಗಳೆಯುತಿದೆ ...ನಿಜ.. ವಯಸ್ಸು ಆಗುತ್ತಿದೆ..ಆದರೆ ಬದುಕು ...ಯಾಂತ್ರಿಕವಾಗಿದೆ.ಇಲ್ಲಿ ಕೃತಕತೆ ಹೊರತು ಬೇರೆ ಏನೂ ಇಲ್ಲ.  ಈ ಮೊಬೈಲ್,ಲ್ಯಾಪ್‌ಟಾಪ್ ,ಇಂಟರ್ನೆಟ್,ಸೋಷಿಯಲ್ ಮೀಡಿಯಾ ಎನುವ ಮಾಯೆಗಳೆಲ್ಲ ನಮಗೆ ಪರಿಚಯವಾಗುವ ಮುನ್ನ ಈ ಜಗವು ಹೇಗಿತ್ತು? ಇಂದು ನಾವು ಅದನ್ನು ನೆನಪಿಸಿಕೊಳ್ಳುವುದಕ್ಕೂ ಸಮಯವಿಲ್ಲದಷ್ಟು ಮೊಬೈಲ್ನ ಮಾಯೆಯೊಳಗೆ ಬಂಧಿಯಾಗಿದ್ದೇವೆ ಎಂದರೆ ನಂಬಲು ಸಾಧ್ಯವಿಲ್ಲ.ಅದರ ಜೊತೆಗೆ ಜಗದ ಎಲ್ಲ ಭೌತಿಕವಾದ ನಂಟು ಕಳಚಿಕೊಂಡು ನೀರವ ಮೌನದೊಡನೆ ಬೆರೆತು ಹೋಗಿದ್ದೇವೆ "ಮಾತು ಬೆಳ್ಳಿ,ಮೌನ ಬಂಗಾರವೆಂಬ ಹಿರಿಯರ ಮಾತಿದೆ.ಬಂಗಾರವೆಂದುಕೊಂಡ ಮೌನಕ್ಕೆ ಬೆಲ...

ಈ ಜಗದಲಿ ನಾನ್ಯಾರು?

Image
ಬದುಕ ನಿಶೆಯೊಳಗಿನಿಂದ ಮೊದಲ ಪುಟ ಈ ಜಗದಲಿ ನಾನ್ಯಾರು??? ಸುಳ್ಳು ಹೇಳಿ ಸವಿಯಾಗಿರಲೇ? ಸತ್ಯ  ಹೇಳಿ ಕಹಿಯಾಗಲೇ?ಇತರರ ಮಾತಿಗಂಜಿ ಮುದುರಿ ಮೂಲೆ ಸೇರಲೇ?ನನ್ನತನವನ್ನು ಮರೆಸಿ ಮುಖವಾಡ ಹೂದ್ದು ಜಗವ ಮೆಚ್ಚಿಸಲು ಪ್ರಯತ್ನಿಸಲೆ? ಅಥವ ಮನಸಾಕ್ಷಿ ಒಪ್ಪದನ್ನು ದಿಕ್ಕರಿಸಿ  ಕೇವಲ ನನ್ನ  ಆತ್ಮೀಯ ಅತ್ಮವನು ನಂಬಲೇ?ಈ ತರಹದ ಗೊಂದಲಗಳು ಎಲ್ಲರ ಬದುಕಿನಲಿ ಸರ್ವೆ ಸಾಮಾನ್ಯ.ಯಾಕೆಂದರೆ ನಾವು ಬದುಕುತಿರುವುದು ಹತ್ತು ಹಲವು ಮನಸ್ಥಿತಿಗಳಿರುವ ಒಂದು ಸಮಾಜದ ಜೊತೆಯಲ್ಲಿ. ಇಲ್ಲಿ ಏನೇ ಕೆಲಸ ಮಾಡಿದರು ಹೂಗಳಿಕೆ ತೆಗಳಿಕೆ ಎರಡನ್ನೂ ಸರಿ ಹೊಂದಿಸಿ ಬಾಳುವುದನ್ನು ಕಲಿಯಬೇಕು..ಹಲವಾರು ಮನಸ್ಥಿತಿಗಳ ಜೊತೆ ನಮ್ಮ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವಷ್ಟರಲ್ಲಿ ಬಾಳು ಗೋಳಾಗುತ್ತದೆ. ಹೊಗಳಿಕೆ ಎಲ್ಲರ ನೆಚ್ಚಿನ ಸಂಗಾತಿ.ಆದರೆ ತೆಗಳಿಕೆ ಕಂಡರೆ  ಮಾತ್ರ ಬಹುದೂರ ಓಡುವರು.ಆದರೆ ಇಲ್ಲಿ ಯಾವುದು ನಿಜವಾಗಿರುತ್ತದೆಯೋ ಅದನ್ನು ಸ್ವೀಕರಿಸುವ ಮನೋಭಾವ ಬಹಳ ಮುಖ್ಯ.ಸಿಹಿ ಕಹಿ ಎರಡೂ ಬದುಕಿಗೆ ಬಹಳ ಮುಖ್ಯ. ಅನ್ಯರ ಮೆಚ್ಚಿಸಿ ಬದುಕಲಾದಿತೇ ಈ ಜಗದಲ್ಲಿ?ಎಲ್ಲರು ಮೆಚ್ಚುವ ವಸ್ತು ಜಗದಲ್ಲಿ ಬಹಳ ವಿರಳ.ಆದ್ದರಿಂದ  ಈ ಜಗದಲ್ಲಿ ಇತರರು ಮೆಚ್ಚಬೇಕೆಂಬ ಮನಸ್ಥಿತಿಯಿಂದ ಕೆಲಸ ಮಾಡಿ ಗೆಲ್ಲಲು ಸಾಧ್ಯವಿಲ್ಲ. ನಾವು ಮಾಡುವ ಕೆಲಸಗಳು ನಮಗೆ ಮನತೃಪ್ತಿ ನಿಡಿದರೆ ಸಾಕು.ನಿಜವೇನಂದರೆ ಈ ಜಗದಲ್ಲಿ ನಮಗಾತ್ಮೀಯವಾದದು ನಮ್ಮಆತ್ಮವೊಂದೆ.ಅದರ ಮೇಲೆ ವಿಶ್ವ...