ಬದುಕ ನಿಶೆಯಲ್ಲೇನಿದೆ?( About This Website)
ಬದುಕ ನಿಶೆಯಲ್ಲಿರುವವರಿಗಾಗಿ.....
ಬದುಕ ನಿಶೆಯೊಳಗಿನಿಂದ ಎಂಬ ಹೊಸ ಬರಹಗಳ ಸಂಕಲನಕ್ಕೆ ಸ್ವಾಗತ..
Welcome to the Beyond The Dark Nights website
ಬದುಕ ನಿಶೆಯ ನಶೆಯೇರಿದಾಗ ಮನುಷ್ಯ ಕಂಗಾಲಾಗುತ್ತಾನೆ. ಬದುಕಲು ಸಾವಿರ ದಾರಿಯಿದ್ದರು ಕೂಡ ಆವರಿಸಿರುವ ಕತ್ತಲು ಆ ದಾರಿಯನ್ನು ಕಣ್ಣಿಗೆ ಕಾಣದಂತೆ ಮರೆಮಾಚುತ್ತದೆ. ಆದರೆ ಈ ಕತ್ತಲಲ್ಲಿ ದಾರಿ ಹುಡುವ ಸಹಾಸ ಮಾಡಲು ಅವನಿಗೆ ನೂರು ಗುಂಡಿಗೆಗಳ ಶಕ್ತಿ ಬೇಕು. ಆಗಾಗ್ಗೆ ಕಾಡುವ ಸಾವನ್ನು ದೂರತಳ್ಳಿ ಗೆಲ್ಲುವ ಮನೋಬಲ ಬೇಕು. ನಿಜವಾಗಿ ನೋಡಿದರೆ ಇದು ಕಷ್ಟವೂ ಅಲ್ಲ ಸುಲಭವೂ ಅಲ್ಲ. ಎಲ್ಲವನ್ನ ದಾಟಲು ಇಲ್ಲಿ ಮನೋಬಲ, ಆತ್ಮವಿಶ್ವಾಸ, ನಂಬಿಕೆ, ಪರಿಸ್ಥಿತಿ, ಮನಸ್ಥಿತಿ, ಮನೆಸ್ಥಿತಿ, ಭಾಂದವ್ಯ, ಬಂಧನ ಜೊತೆಗೆ ಅದೃಷ್ಟ ಹಾಗೂ ಹಣೆಬರಹದ ಪಾತ್ರ ವೂ ಸಹಕಾರಿ. ಆದರೆ ಇನ್ನೊಂದು ವಿಚಿತ್ರ ಏನು ಗೊತ್ತ? ಬದುಕ ಕತ್ತಲಲ್ಲಿ ದಾರಿ ಹುಡುಕುವವನಿಗೆ ಮೇಲೆ ಹೇಳಿದ ಎಲ್ಲ ವಿಚಾರಗಳು ಒಟ್ಟಾಗಿ ಸಹಾರ ಮಾಡುವುದಿಲ್ಲ. ಅಲ್ಲೂ ಹಲವು ಹಗ್ಗಜಗ್ಗಾಟ. ಈ ಎಲ್ಲ ಜಂಜಾಟಗಳನ್ನು ಜಾಣತನದಿಂದ ಸಮದೂಗಿಸಿಕೊಂಡು ಹೋಗುವುದು ಇದೆಯಲ್ಲ, ಅದು ಕಷ್ಟ ವಾದ ವಿಚಾರ. ಇಲ್ಲಿ ಬದುಕಿನ ವರ್ತಮಾನ ಪರಿಸ್ಥಿತಿ ಮತ್ತು ಭವಿಷ್ಯದ ಗುರಿಯ ಅರಿವು ಬಹಳ ಮುಖ್ಯ.ಅದೇ ಬದುಕ ನಿಶೆಯೊಳಗಿನ ವಾಸ್ತವಗಳು.
ಪರಿಸ್ಥಿತಿಗಳು ಹೇಗೇ ಇರಲಿ...
ಸರಿಪಡಿಸಿಕೊಂಡು ಹೋಗುವ ಮನಸ್ಥಿತಿ ಬೆಳೆಸಿಕೊಂಡು
ನಾವು ಮುಂದೆ ಹೋಗೋಣ..
ಬರಹ ಎಂದ ಮೇಲೆ ಕಥೆಯೋ, ಲೇಖನವೋ, ಕವನವೋ, ಯಾವುದಾದರೇನೂ....?ನಿಜವಾದ ಓದುಗನಿಗೆ ಎಲ್ಲವೂ ಬೇಕು.
From
ಬದುಕ ನಿಶೆಯೊಳಗಿನಿಂದ (Beyond The Dark Nights..)


Comments
Post a Comment