Posts

ಭಾವನೆಗಳ ಮಾಯಲೋಕದ ಆಚೆಗೆ

Image
ಖಾಲಿ ಹೃದಯ, ಆಕಾಶ ನೀಲಿ ರಂಗು, ಮನದಾಳದಲ್ಲಿ ಸದ್ದಾಗದಂತೆ ಭೋರ್ಗರೆಯುವ ಹಗುರವಾದ ಭಾವದಲೆಗಳು… ಬದುಕು ಒಂದು ಶಾಂತ ಸಾಗರ. ಮೌನರಾಗದ ಜೊತೆ, ಪ್ರಶಾಂತವಾದ ಮಾತುಕತೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಆ ಸಮಯದ ಚಂದವೇ ಬೇರೆ ಲೆವೆಲ್. ಇಂತಹ ಬದುಕನ್ನು ನೋಡುವ ಕೆಲವರು ಇಂಗ್ಲಿಷ್‌ನಲ್ಲಿ “Boring Personality” ಎಂದು ಕರೆಯಬಹುದು. ಆದರೆ ನಿಜವಾಗಿಯೂ ಮೌನವಾಗಿರುವ ಮನಸ್ಸು ಬೋರ್ ಆಗಿರುತ್ತದೆಯೇ? ಒಂಟಿಯಾಗಿ ಇರುವ ವ್ಯಕ್ತಿ ಖಾಲಿಯಾಗಿರುತ್ತಾನೆಯೇ? ಬಹುಶಃ ಇಲ್ಲ. ವಾಸ್ತವವಾಗಿ ನೋಡಿದರೆ, ಮೌನ ಮತ್ತು ಒಂಟಿತನ ಎರಡೂ ಭಯಾನಕ. ಮನುಷ್ಯ ಭಾವನಾಜೀವಿ. ತನ್ನ ಭಾವನೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂಬ ಆಸೆ ಅವನಿಗಿದೆ. ಸಂಘ-ಒಡನಾಟ ಅವನಿಗೆ ಉಸಿರಾಟದಷ್ಟೇ ಅವಶ್ಯಕ. ಸಂತೋಷವನ್ನು ಹಂಚಿಕೊಳ್ಳಲು ಯಾರಾದರೂ ಬೇಕು; ನೋವನ್ನು ಕೇಳಲು ಮತ್ತೊಬ್ಬರು ಬೇಕು. ಆದರೆ ವಾಸ್ತವ ಮತ್ತು ಕಲ್ಪನೆ—ಇವೆರಡನ್ನೂ ಮೀರಿಸುವ ಒಂದು ಸತ್ಯವಿದೆ. ಅದು ಹುಟ್ಟಿನ ಹಿಂದಿನ ಗತ ಮತ್ತು ಸಾವಿನ ನಂತರದ ಭವಿಷ್ಯ. ಇವೆರಡನ್ನು ಸಂಪೂರ್ಣವಾಗಿ ಬಲ್ಲವರು ಯಾರಾದರೂ ಇದ್ದಾರೆಯೇ? ಖಂಡಿತ ಇಲ್ಲ. ಹಾಗಾದರೆ ಈ ಒಂಟಿತನ, ಈ ಮೌನ, ಹುಟ್ಟಿನ ಹಿಂದಿನ ಗತ ಮತ್ತು ಸಾವಿನ ನಂತರದ ಭವಿಷ್ಯ—ಇವೆಲ್ಲಕ್ಕೂ ಏನಾದರೂ ಸಂಬಂಧವಿದೆಯೇ? ಬಹುಶಃ ಇದೆ. ಅದೇನು ಎಂಬುದನ್ನು ಅರಿಯುವ ಪ್ರಯತ್ನವೇ ಬದುಕಿನ ಮತ್ತೊಂದು ಪಯಣ. ನಾವು ಹುಟ್ಟಿನಿಂದಲೇ ಒಂದು ನಂಟನ್ನು ಹೊತ್ತುಕೊಂಡು ಬರುತ್ತೇವೆ. ತಾಯಿಯ...

ಭಾಗ_2

Image
  ಮದುವೆ —ಮನುಷ್ಯನ ಜೀವನದ ಆರಂಭವೇ?  ಜೀವನದ ಒಂದು ಸುಂದರ ಅಧ್ಯಾಯವೇ?ಅನಿವಾರ್ಯತೆಯೇ?..ಯಾವುದು ಅಲ್ಲ. ಬದುಕಿನ ಒಂದು ಭಾಗವಷ್ಟೆ.ಮದುವೆ ಅನಿವಾರ್ಯವೂ ಅಲ್ಲ.ಆಧ್ಯತೆಯೂ ಅಲ್ಲ. "ಅದೊಂದು ಆಯ್ಕೆ".  ಒಬ್ಬ ವ್ಯಕ್ತಿಯ ಜೀವನ ಏನು ಅನ್ನುವುದನ್ನು ನಿರ್ಧಾರ ಮಾಡುವುದು ದುವೆಯಲ್ಲ; ಅದು ಅವನ ವ್ಯಕ್ತಿತ್ವ  ಜೀವನ ಶೖಲಿ  ಮತ್ತು ಕಾಲದ ಬದಲಾವಣೆ .ಹೌದು ಮದುವೆ  ಸಂತಾನೋತ್ಪತ್ತಿಯ ಶಿಸ್ತನ್ನು ಸಾರುವ ಒಂದು ಗಂರವಯುತವಾದ ಸಂಪ್ರದಾಯ.ಅದರೊಳಗೆ ಸಾವಿರಾರು ವಿಚಾರಗಳಿವೆ. ಅದು ಪವಿತ್ರವಾದದ್ದು ಹಾಗೂ ಚರ್ಚೆಗೆ ನಿಲುಕದ ವಿಷಯಗಳು.. ಹೌದು...ಒಂದು ಕಾಲದಲ್ಲಿ ಮದುವೆ ಎಂದರೆ ಜೀವನದ ‘Starting Line’ ಆಗಿತ್ತು. ಅಲ್ಲಿ ಹೆಣ್ಣು ಮನೆ ನಿಭಾಯಿಸುತ್ತಿದ್ದಳು, ಗಂಡು ದುಡಿಯುತ್ತಿದ್ದ. ಬೇಗ ಮದುವೆಯಾಗುವುದು, ನಂತರ ಇಬ್ಬರೂ ಸೇರಿ ಬದುಕನ್ನು ಕಟ್ಟಿಕೊಳ್ಳುವುದು—ಅದೇ ಸಹಜವಾದ ಜೀವನಕ್ರಮವಾಗಿತ್ತು. ಆದರೆ ಈ ಜೀವನಕ್ರಮದಲ್ಲಿ ಹೆಣ್ಣು ಅತಿ ಹೆಚ್ಚು ಶೋಷಣೆಗೆ ಒಳಗಾದಳು. ಹೊರ ಪ್ರಪಂಚದ ಅರಿವಿಲ್ಲದ ಅವಳು ನಾಲ್ಕು ಗೋಡೆಗಳೇ ತನ್ನ ಬದುಕು ಎಂದುಕೊಂಡು, ಅನೇಕ ದೌರ್ಜನ್ಯಗಳನ್ನೂ ನೋವುಗಳನ್ನೂ ಸಹಿಸುತ್ತಿದ್ದಳು. ಆದರೆ ಕಾಲಕ್ರಮೇಣ ಹೆಣ್ಣಿನ ಬದುಕು ನಿಧಾನವಾಗಿ ಬದಲಾಗತೊಡಗಿತು. ಅವಳು ವಿದ್ಯೆಯ ಕಡೆಗೆ ಒಲವು ತೋರಿದಳು. ಆರ್ಥಿಕ ಸ್ವಾತಂತ್ರ್ಯದ ಪಣ ತೊಟ್ಟಳು. ತನ್ನ ಕಾಲಿನ ಮೇಲೆ ತಾನು ನಿಲ್ಲುವ ಆಸೆ ಬೆಳೆಸಿಕೊಂಡಳು. ಆಗ ಸಮಾಜದ ...

ಮಿಲೆನಿಯಲ್ಸ್ ಅಂತರಾಳ...

Image
  ಮಿಲೇನಿಯಲ್ಸ್ (Millennials) ಎಂದರೆ ಕೇವಲ ಒಂದು ತಲೆಮಾರಲ್ಲ; ಇವರು ಜಗತ್ತಿನ ಮಹಾ ಪಲ್ಲಟದ ಕಾಲಕ್ಕೆ ಸಾಕ್ಷಿಯಾದ ಅಪರೂಪದ ಜೀವಗಳು. ಚರಿತ್ರೆ ಇವರನ್ನು ೧೯೮೧ ರಿಂದ ೧೯೯೬ರ ನಡುವೆ ಜನಿಸಿದವರು ಎಂದು ಪರಿಚಯಿಸುತ್ತದೆ. ಆದರೆ ಇವರ ನಿಜವಾದ ಪರಿಚಯ ಎಷ್ಟು ಸುಂದರವಾಗಿದೆ ಗೊತ್ತಾ? ಸಂಪ್ರದಾಯ ಮತ್ತು ತಂತ್ರಜ್ಞಾನ ಎಂಬ ಎರಡು ಯುಗಗಳನ್ನು ಜೋಡಿಸಿದ ಅಪರೂಪದ ಸೇತುವೆ ಮಿಲೇನಿಯಲ್ಸ್. ಅನಲಾಗ್ ಜಗತ್ತಿನ ಮುಗ್ಧತೆ ಮತ್ತು ಡಿಜಿಟಲ್ ಜಗತ್ತಿನ ಆಧುನಿಕತೆ ಎರಡನ್ನೂ ಸಮಾನವಾಗಿ ಅನುಭವಿಸಿದ ಏಕೈಕ ಪೀಳಿಗೆ. ಈ ಪರಿವರ್ತನಾ ಯುಗದ ಸಮತೋಲನವನ್ನು ಸಮದೂಗಿಸಿಕೊಂಡು ಜಗತ್ತಿನ ಈ ಪರಿವರ್ತನೆಯ ಸವಾಲಿಗೆ ಉತ್ತರವಾದಂತಹ ಪೀಳಿಗೆ ಮಿಲೇನಿಯಲ್ಸ್. ತಾಳ್ಮೆ ಇವರ ನಿಜವಾದ ಶಕ್ತಿ. ಒಂದು ಕಡೆ ಬೆಳಕಿಗಿಂತ ವೇಗವಾಗಿ ಓಡುತ್ತಿರುವ ಡಿಜಿಟಲ್ ತಂತ್ರಜ್ಞಾನ, ಇನ್ನೊಂದೆಡೆ ಬದುಕಿನಲ್ಲಿ ಬೇರೂರಿದ ಸಂಪ್ರದಾಯ. ಇವೆರಡರ ನಡುವೆ ಇಂದಿಗೂ ಸಮತೋಲನ ಕಾಪಾಡುತ್ತಿರುವ ಪೀಳಿಗೆ ಮಿಲೇನಿಯಲ್ಸ್. ಮಿಲೇನಿಯಲ್ಸ್ ಬದುಕಿನ ಹಸಿರು ಮತ್ತು ಒಣ ಎರಡನ್ನೂ ಕಂಡವರು. ಇವರು ಬಾಲ್ಯದಲ್ಲಿ ಮುಸ್ಸಂಜೆಯ ಕತ್ತಲೆ, ಲೋಡ್ ಶೆಡ್ಡಿಂಗ್ ಮತ್ತು ಬೀದಿದೀಪದ ಕೆಳಗಿನ ಹರಟೆಯನ್ನು ನೋಡಿದ್ದಾರೆ. ಬೆಳೆಯುತ್ತಾ ಇಡೀ ಜಗತ್ತೇ ಮೊಬೈಲ್ ಪರದೆಯೊಳಗೆ ಅಡಗಿಕೊಳ್ಳುವ ಕ್ರಾಂತಿಯನ್ನೂ ನೋಡಿದ್ದಾರೆ. ಹಳೆಯ ಕಾಲದ ಸಂಸ್ಕೃತಿಯ ಸವಿಯೂ ಇವರಿಗಿದೆ, ಹೊಸ ಕಾಲದ ತಂತ್ರಜ್ಞಾನದ ಅರಿವೂ ಇವರಿಗಿದೆ. ಇವರು ಈ ಜಗದ ನಿಶ...

ಬದುಕ ತೆರೆಯ ಹಿಂದಿನ ಕಥೆಯ ವ್ಯಥೆಗಳು.

Image
  ಈ ಜಗತ್ತು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಹಲವಾರು ಕಥೆಗಳನ್ನು ಹೇಳುತ್ತೆ. ಅವಳು ಹಾಗಂತೆ, ಅವನು ಹೀಗಂತೆ, ಕೆಲವೊಬ್ಬರಿಗೆ ಅಯ್ಯೋ ಅನ್ನುತ್ತೆ, ಇನ್ನೂ ಕೆಲವರನ್ನು ಗೇಲಿ ಮಾಡುತ್ತದೆ. ಮತ್ತೆ ಕೆಲವರನ್ನು ಟೀಕೆ ಮಾಡುತ್ತದೆ. ಹಾಗೆಯೇ ಕೆಲವೊಬ್ಬರ ಕಥೆಗಳನ್ನು ಹಾಸ್ಯ ಕೂಡ ಮಾಡುತ್ತದೆ. ಇದು ಜಗದ ನಿಯಮ, ಜನರ ನಿಯಮ. ಬದಲಾಯಿಸಲಾಗದಂತಹ ಒಂದು ವಿಷಯ.ಇದು ಕೇವಲ ಜಗದ ಊಹೆಯ ಪ್ರಕಾರ ಯಾರದೋ ಒಬ್ಬರ ಬದುಕು.ಇಂತಹ ಗಾಳಿಸುದ್ದಿಗಳು ಸದ್ದು ಮಾಡುವಾಗ ಪ್ರತಿ ಮನೆಯ ಗೋಡೆಗೂ ಕಿವಿಯಿರುತ್ತದೆ. ಯಾಕೆಂದರೆ ಊಹಾ ಪೋಹಗಳು ನೖಜ್ಯತೆಗಿಂತ ಬಹಳ ಸುಂದರವಾಗಿರುತ್ತದೆ.ಆದರೆ ನಿಜವೇನೆಂದರೆ ಬದುಕು ಯಾರಿಗೂ ಸುಲಭ ಇಲ್ಲ ಇಲ್ಲಿ. ಬದುಕಿನ ಕಷ್ಟಗಳ ಬಿಗಿ ಎಲ್ಲರಿಗೂ ಉರುಳಾಗಿ ಉಸಿರ ಬಿಗಿಯುತಿರುತ್ತದೆ. ಇಲ್ಲಿ ಯಾರ ಬದುಕು ಕೂಡ ನಾವು ಊಹಿದಷ್ಟು ಸುಲಭವಾಗಿಲ್ಲ. ಆದರೆ ಇವೆಲ್ಲವನ್ನು ಬಿಟ್ಟು ಪ್ರತಿಯೊಬ್ಬನಿಗೂ ಒಂದು ಬದುಕಿನ ಕಥೆ ಇರುತ್ತದೆ. ಆ ಕಥೆಯಲ್ಲಿ ಈ ಕಟ್ಟುಕಥೆಯ ತರಹ ವ್ಯಂಗ್ಯ, ಹಾಸ್ಯ, ಟೀಕೆ, ಇದ್ಯಾವುದು ಇರುವುದಿಲ್ಲ. ಒಂದಿಷ್ಟು ಖುಷಿಯ ವಿಚಾರಗಳು ಹಾಗೆಯೇ ಒಂದಷ್ಟು ಕಹಿಯ ನೋವುಗಳು ಅಷ್ಟೇ.. ಇವುಗಳನ್ನು ಆಲಿಸುವವರು ಬಹಳ ಕಡಿಮೆ. ಮೊದಲಿಗೆ ಕೆಲವರು ಕೇಳಬಹುದು. ನಂತರ ಈ ವಿಚಾರಗಳು ಸಪ್ಪೆ ಮತ್ತು ಬೇಸರವೆನಿಸುತ್ತದೆ. ಯಾಕೆಂದರೆ ಈ ಜಗತ್ತು ಮನರಂಜನೆಯನ್ನು ಬಯಸುತ್ತದೆ ಹೊರತು ಸತ್ಯವನ್ನಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬನ ಮನುಷ್ಯನ ಬದುಕು ಕ್ಷಣ...
Image
ನಾವು ಈ ಜಗದಲ್ಲಿ ಯಾರನ್ನೇ ಭೇಟಿಯಾಗಲಿ ಪ್ರತಿ ಜೀವ ಒಂದೊಂದು ನೋವಿನ ಕಥೆಯನ್ನು ಹೇಳುತ್ತದೆ. ಪರರಿಂದ ತನಗಾದ ಅನ್ಯಾಯ, ಕಠಿಣ ಪರಿಸ್ಥಿತಿಯಲ್ಲಿ ತನ್ನನ್ನು ತಾನು ಸದೃಢಗೊಳಿಸಿಕೊಂಡು ಅದನ್ನು ನಿಭಾಯಿಸಿದ ರೀತಿ, ತಮ್ಮ ಭಯಾನಕ ಅನುಭವಗಳು, ಹೀಗೆ ಹತ್ತು ಹಲವಾರು ಭಾವನಾತ್ಮಕವಾದ ಅನುಭವ ಕಥೆಗಳನ್ನು ಕೇಳುತ್ತೇವೆ.ಪ್ರತಿಯೊಬ್ಬರ ಕಥೆಯಲ್ಲೂ ನ್ಯಾಯ ಅವರ ಪರವಿರುತ್ತದೆ. ಅನ್ಯಾಯ ಇತರರಿಂದ ಆಗಿರುತ್ತದೆ. ಆದರೆ ಇಬ್ಬರ ಕಥೆ ಕೇಳಿ ಇಬ್ಬರನ್ನ ಎದುರು ಬದುರು ನಿಲ್ಲಿಸಿ ಕೇಳಿದರೆ ಅಲ್ಲಿ ಕಥೆಯೆ ಬೇರೆ ಇರುತ್ತದೆ. ಇಲ್ಲಿ ಪ್ರತಿ ಘಟನೆಯಲ್ಲೂ ಮನುಷ್ಯ ತನ್ನ ಒಳ್ಳೆಯತನವನ್ನು ತೋರಿಸಲು ಬಯಸುತ್ತಾನೆ ಹೊರತು ತಪ್ಪನಲ್ಲ. ಇದು ಮನುಷ್ಯ ಸಹಜ ಗುಣ. ಯಾಕೆಂದರೆ ಈ ಜಗತ್ತು ಬೇರೆಯವರ ತಪ್ಪು ಕಂಡರೆ ಸಾಕು, ಅವರ ಬದುಕನ್ನು ಹುರಿದು ಹಿಂಸೆ ಮಾಡುತ್ತದೆ.  ಇಂತಹ ಕಥೆಗಳುಈ ಜಗತ್ತಿನಲ್ಲಿ ಪ್ರತಿಯೊಬ್ಬರ ಬದುಕಲ್ಲೂ ಒಂದೊಂದು ಇರುತ್ತದೆ. ಇಲ್ಲಿ ಒಂದು ಕುತೂಹಲಕರವಾದ ವಿಚಾರವೆಂದರೆ ಇಲ್ಲಿ ನಮ್ಮ ಬದುಕಿನ ಕಥೆಗೆ ನಾವೇ ಹೀರೋಗಳು. ನಮ್ಮ ಪ್ರಕಾರ ನಾವೇ ಒಳ್ಳೆಯವರು. ಕೇಡು ಹಾನಿಗಳು ನಮಗೆ ಇತರರಿಂದ ಆಗಿರುತ್ತದೆ ಹೊರತು ಅಲ್ಲಿ ನಮ್ಮ ತಪ್ಪುಗಳು ಏನು ಇರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ.ಆದರೆ ನಿಜವಾಗಿ ನೋಡಿದರೆ ಬಹಳಷ್ಟು ಸಲ ತಪ್ಪುಗಳು ಎರಡೂ ಕಡೆ ಇರುತ್ತದೆ. ಆದರೆ ನಾವು ಒಪ್ಪಲು ಸಿದ್ದವಿರುವುದಿಲ್ಲ. ಕಾರಣ ಸಮಾಜದ ಭಯ. ನಾವು ಒಂದು ಘಟನೆ ನಡೆದಾಗ ಅಥವಾ ...

ಇರುವುದೆಲ್ಲವ ಬಿಟ್ಟು....

Image
    "ಏನೆಂದೂ ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ" ಮನುಷ್ಯನ ಬದುಕಿನಲ್ಲಿ ಆಸೆಯು ಎಂದಿಗೂ ನಿಲ್ಲದ ಒಂದು ನಿರಂತರ ಪ್ರಕ್ರಿಯೆ. ಈ ಬಗ್ಗೆ ಡಾ. ರಾಜಕುಮಾರ್ ಅವರು ಹಾಡಿರುವ ಮೇಲಿನ ಸಾಲುಗಳು ಅಕ್ಷರಸ: ಮನಮುಟ್ಟುವವುಗಳು. ಮನುಷ್ಯ ಯಾಕೆ ಹೀಗೆ?ಮನದಲ್ಲಿ ಚಿಗುರಿ ನಿಲ್ಲದೆ ಓಡುವ ಬಯಕೆಗಳ ಹಿಂಬಾಲಿಸಿ ಕೊನೆಗೆ ಬದುಕನ್ನು ಗೋಳಿನ ತಾಣವನ್ನಾಗಿಸಿ ಬದುಕೆಲ್ಲ ನೆಮ್ಮದಿಯ ಅರಸುವ ಮೂರ್ಖನಾಗುತ್ತಾನೆ. ಈ ಜಗತ್ತಿನಲ್ಲಿ ಸರ್ವ ಸುಖವನ್ನು ಅನುಭವಿಸಿ ಸಾಯುವಷ್ಟು ಆಯಸ್ಸು ಯಾರಿಗಿದೆ.? ಮನುಷ್ಯನ ಸೃಷ್ಟಿಯೇ ವಿಭಿನ್ನ.ಈ ಜಗದಲ್ಲಿ ಪ್ರತಿಯೊಬ್ಬನ ಬದುಕಿಗೂ ಒಂದು ಉದ್ದೇಶ ಇದೆ ನಿಜ. ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಕರ್ಮಗಳನ್ನು ಪೂರ್ತಿ ಮಾಡಲು ಭೂಮಿ ಮೇಲೆ ಜನ್ಮ ತಾಳುತ್ತಾನೆ ಅನ್ನುವ ನಂಬಿಕೆಯಿದೆ. ಹಾಗೆಯೇ ಇಲ್ಲಿ ಪ್ರತಿಯೊಬ್ಬನ ಪಾತ್ರವೂ ವಿಭಿನ್ನ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ ಬಹಳಷ್ಟು ಜನ ಬೇರೆಯವರನ್ನು ಅನುಕರಿಸಲು ಹೋಗಿ ತಮ್ಮ ಬದುಕಿನ ವಿಭಿನ್ನತೆಯನ್ನು ಕಳೆದುಕೊಂಡು ತಮ್ಮ ಬದುಕಿನ ಅಂದವನ್ನು ತಾವೇ ಕೆಡಿಸಿಕೊಳ್ಳುತ್ತಾರೆ. ಮನುಷ್ಯನ ಬದುಕು ಈ ಜಗತ್ತಿನಲ್ಲಿ "ವೖವವಿಧ್ಯತೆಯಲ್ಲಿ ಏಕತೆ"ಗೆ ಉತ್ತಮ ಉದಾಹರಣೆ. ಅದೆಷ್ಟು ವಿಶೇಷ ವೖಶಿಷ್ಟ್ಯ ಬದುಕಿನ ಕಥೆಗಳು ಈ ಜಗತ್ತಿನಲ್ಲಿ ಇಂದಿಗೂ ಅದ್ಬುತ ಪ್ರದರ್ಶನಗಳನ್ನು ನೀಡುತ್ತಿದೆ. ಈ ಜಗತ್ತಿನಲ್ಲಿ ಬದುಕುವ ಪ್ರತಿ ಸಾಮಾನ್ಯ ಮನುಷ್ಯನ ಬದುಕಿನಲ್ಲೂ ವಿಭಿನ್ನ ವಿಶೇಷ ...

ಒಲವ ಹಲವು ಮುಖಗಳು_1

Image
  ಒಲವ ಹಲವು ಮುಖಗಳು ಈ ಜಗತ್ತು ನಮಗೆ ಹಲವಾರು ವಿಭಿನ್ನವಾದ ಒಲವ ದಂತಕಥೆಗಳನ್ನು ಹೇಳುತ್ತದೆ.ಅದು ಕಾಲ್ಪನಿಕವೂ ಇರಬಹುದು, ವಾಸ್ತವದಲಿ ನಡೆದಿರುವ ಘಟನೆಗಳೂ ಆಗಿರಬಹುದು.ಬದುಕಿನಲ್ಲಿ ಪ್ರೀತಿ ಸಿಂಗಾರಗೊಂಡು ಮೆರೆಯತೊಡಗಿದರೆ ಆ ಚಂದನೇ ಬೇರೆ. ಪ್ರೀತಿಯೇ ಬದುಕಲ್ಲ ನಿಜ. ಆದರೆ ಬದುಕಿನಲ್ಲಿ ಪ್ರೀತಿ ಇದ್ದರೆ ಬದುಕಿನ ಬಣ್ಣಗಳೇ ಬದಲಾಗಿ ಬದುಕು ರಮ್ಯ ಚೖತ್ರಕಾಲವಾಗಿರುತ್ತದೆ.ಆದರೆ ಈ ಪ್ರೀತಿ ಇಲ್ಲಿ ಶುದ್ದವಾಗಿರಬೇಕು. ಇಲ್ಲವಾದರೆ ಬದುಕು ಬಣ್ಣ ಕಳೆದುಕೊಂಡು ಸಪ್ಪೆಯಾಗಬಹುದು. ಈ "ಪ್ರೀತಿ ಪ್ರೇಮ" ಎಲ್ಲ ಕಥೆಗಳಲ್ಲಿ ಓದೋಕೆ ಚೆನ್ನಾಗಿರುತ್ತದೆ. ವಾಸ್ತವದ ಬದುಕಿನಲ್ಲಿ ಬರಿಯ ನರಕದರ್ಶನವೇ ಎನುವುದು ಕೆಲವರ ವಾದ. ಇದೇ ಪ್ರೀತಿಯನ್ನು ಕೆಲವರು ಸ್ವರ್ಗಕ್ಕೂ ಹೋಲಿಸುತ್ತಾರೆ. ಇಲ್ಲಿ ಯಾವುದು ಸರಿ, ಯಾವುದು ತಪ್ಪು? ಇದು ಅವರವರ ಭಾವಕ್ಕೆ ಸರಿಯಾಗಿ ಬದಲಾಗೋ ವಿಷಯನಾ? ಅಥವಾ ಅವರವರ ಬದುಕಿನ ಅನುಭವಕ್ಕೆ ಸೀಮಿತವಾದ ವಿಷಯನಾ? ಇಲ್ಲಿ ಎರಡೂ ನಿಜ. ಪ್ರೀತಿ ಭಾವ ಹಾಗೂ ಬದುಕಿಗೆ ಅಂಟಿದ ನಂಟು.ಅದನ್ನು ಕೇವಲ ಒಂದು ಭಾವವೆಂದುಕೊಂಡರೆ ಅದು ಭಾವವಷ್ಟೆ. ಬದುಕೆಂದುಕೊಂಡರೆ ಅದು ಬದುಕು. ಪ್ರೀತಿ ಆಕರ್ಷಣೆಯಲ್ಲ, ಮೋಹವಲ್ಲ, ಅನುರಾಗವಲ್ಲ, ಅನುಕಂಪವೂ ಅಲ್ಲ. ಪ್ರೀತಿ ಕೇವಲ ಪ್ರೀತಿಯಷ್ಟೆ. ಅದು ಎಂದಿಗೂ ಪರಿಶುದ್ದ. ಪ್ರೀತಿ ಖಂಡಿತ ಒಂದು ಸಂಬಂಧವಲ್ಲ.ನಿಜವಾದ ಪ್ರೀತಿ ಎನ್ನುವುದು ಜೀವ ಜೀವನವನ್ನೆ ಬೆಸೆಯುವ ಒಂದು ನವಿರಾದ ಬಂಧನ.ಅದು ಬಿಗಿಯಾದರೆ ಕ...