ಹೆಣ್ಣೆಂದರೆ





ಭೂಮಿ ಮೇಲೆ ಹೆಣ್ಣಾಗಿ ಹಲವು ಜಗವನ್ನು ಮೆಚ್ಚಿಸುವುದು ಕಷ್ಟದ ಕೆಲಸ. ಆಕೆ ಹೇಗಿದ್ದರೂ ಒಡಕು ಹುಡುಕುವ ಜಗವನ್ನು ಹೇಗೆ ಮೆಚ್ಚಿಸುವಳು ಅವಳು?

ಆದರೆ ಜಗವನ್ನು ಮೆಚ್ಚಿಸೋದೇ ಬದುಕು ಅಂದವರು ಯಾರು?ಬದುಕು ನಮ್ಮಿಷ್ಟದಂತೆ ಬಾಳೋದು ಯಾಕಾಗಬಾರದು? ಇಷ್ಟ ಅಂದ ತಕ್ಷಣ ಸ್ವೇಚ್ಛೆ ಅಲ್ಲ. ಮನಸಾಕ್ಷಿಯ ತಕ್ಕಡಿಯಲಿ ಧರ್ಮ, ನ್ಯಾಯ, ಸತ್ಯದ ಕಡೆ ಇರುವ ವಿಚಾರಗಳು. ಸ್ವತಂತ್ರ, ದಿಟ್ಟ, ನೖತಿಕ ನಿರ್ಧಾರಗಳು. ಸೋಲಿಗಂಜದೆ, ಅನ್ಯಾಯದ ಮನೆಯ ಹೊಸಿಲು ತುಳಿಯದೆ ಧರ್ಮದ ಹಾದಿಯಲ್ಲಿನ ನಿರಂತರ ಪಯಣ.ಕಷ್ಟಗಳ ಕಲ್ಲು ಮುಳ್ಳಿನ ನಡುವೆ ಇಷ್ಟವಾಗಿ ನಡೆಯೋದು... ಈ ಬದುಕನ್ನು ಜಗವು ಮೆಚ್ಚುವುದೇ. ಗೆದ್ದರೆ ಖಂಡಿತ ಮೆಚ್ಚುವುದು.. ಹಾಗೆಯೇ ಸೋತರೆ ಚುಚ್ಚುವುದು...


ಶೀರ್ಷಿಕೆ :ಹೆಣ್ಣೆಂದರೆ.....

ಆಕೆ ಸೀತೆಯಾದರೆ ಅಪವಾದ ಹೊರಿಸಿ
ವನವಾಸಕ್ಕೆಅಟ್ಟುವುದು ಈ ಸಮಾಜ
ಒಂದು ವೇಳೆ ಅವಳು ರಾಧೆಯಾದರೆ
ಪ್ರೀತಿಯನ್ನು ಕಸಿದು ಬದುಕೆಲ್ಲ ವಿರಹದ ಸಜ

ಆಕೆ ದ್ರೌಪದಿಯಾದರೆ, ಮಾಡುವರು
ತುಂಬ ಸಭೆಯಲಿ ಅವಮಾನ
ಸತಿಯಾಗಿ ಅನುಭವಿಸಿದಳು 
ತಂದೆಯಿಂದಲೆ ತನ್ನ ಪತಿಗೆ ಅವಮಾನ

ಆಕೆ ಕೇವಲ ಹೆಣ್ಣೆಂಬ ಕಾರಣಕೆ
ಕೆಣಕಿ ಕೆದಕಿ ಹುಡುಕುವರು ಒಡಕು.
ಆಕೆ ಅದೆಷ್ಟು ನೆಟ್ಟಗಿದ್ದರೂ ಸೊಟ್ಟಗಿರುವ
ಸಮಾಜ ಅವಳಲ್ಲಿ ಹುಡುಕುವುದು ಬರಿ ತೊಡಕು

ಅವಳಂದವಿದ್ದರೂ ತಪ್ಪು, ಕುರುಪಿಯಾದರೂ ತಪ್ಪು 
ವಿದ್ಯೆಯಿದ್ದರೆ ಸೊಕ್ಕು, ಪೆದ್ದಿಯಾದರೆ ಯಾರು ದಿಕ್ಕು?
ಹೊರಗಡಿಯಿಟ್ಟರೆ ಅವಳ ನಡತೆಗೆ ಕುತ್ತು
ಮನೆಯೊಳಗಿದ್ದರೆ ಆಕೆ ಬೆಲೆಯಿಲ್ಲದ ಸಂಪತ್ತು 

ಹೇಗಿದ್ದರೂ ತಪ್ಪೆನುವವರ ಮುಂದೆ 
ಕೇವಲ ಭಗವಂತ ಮೆಚ್ಚುವಂತಿರಬೇಕು
ಅವರಿವರ ಒಪ್ಪಿಸುವ ಚಿಂತೆ ಬಿಟ್ಟು
ನಮಗಿಷ್ಟ ಬಂದಂತೆ ಹಾಯಾಗಿರಬೇಕು

PNRAI 





Comments

Popular posts from this blog

ಈ ಜಗದಲಿ ನಾನ್ಯಾರು?

ಭಾವಗಳ ಬಚ್ಚಿಟವನು...

ಮಾತು ಮರೆತವರು..