ಈ ಜಗದಲಿ ನಾನ್ಯಾರು?

ಬದುಕ ನಿಶೆಯೊಳಗಿನಿಂದ

ಮೊದಲ ಪುಟ

ಈ ಜಗದಲಿ ನಾನ್ಯಾರು???


ಸುಳ್ಳು ಹೇಳಿ ಸವಿಯಾಗಿರಲೇ? ಸತ್ಯ  ಹೇಳಿ ಕಹಿಯಾಗಲೇ?ಇತರರ ಮಾತಿಗಂಜಿ ಮುದುರಿ ಮೂಲೆ ಸೇರಲೇ?ನನ್ನತನವನ್ನು ಮರೆಸಿ ಮುಖವಾಡ ಹೂದ್ದು ಜಗವ ಮೆಚ್ಚಿಸಲು ಪ್ರಯತ್ನಿಸಲೆ? ಅಥವ ಮನಸಾಕ್ಷಿ ಒಪ್ಪದನ್ನು ದಿಕ್ಕರಿಸಿ  ಕೇವಲ ನನ್ನ  ಆತ್ಮೀಯ ಅತ್ಮವನು ನಂಬಲೇ?ಈ ತರಹದ ಗೊಂದಲಗಳು ಎಲ್ಲರ ಬದುಕಿನಲಿ ಸರ್ವೆ ಸಾಮಾನ್ಯ.ಯಾಕೆಂದರೆ ನಾವು ಬದುಕುತಿರುವುದು ಹತ್ತು ಹಲವು ಮನಸ್ಥಿತಿಗಳಿರುವ ಒಂದು ಸಮಾಜದ ಜೊತೆಯಲ್ಲಿ.
ಇಲ್ಲಿ ಏನೇ ಕೆಲಸ ಮಾಡಿದರು ಹೂಗಳಿಕೆ ತೆಗಳಿಕೆ ಎರಡನ್ನೂ ಸರಿ ಹೊಂದಿಸಿ ಬಾಳುವುದನ್ನು ಕಲಿಯಬೇಕು..ಹಲವಾರು ಮನಸ್ಥಿತಿಗಳ ಜೊತೆ ನಮ್ಮ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವಷ್ಟರಲ್ಲಿ ಬಾಳು ಗೋಳಾಗುತ್ತದೆ. ಹೊಗಳಿಕೆ ಎಲ್ಲರ ನೆಚ್ಚಿನ ಸಂಗಾತಿ.ಆದರೆ ತೆಗಳಿಕೆ ಕಂಡರೆ  ಮಾತ್ರ ಬಹುದೂರ ಓಡುವರು.ಆದರೆ ಇಲ್ಲಿ ಯಾವುದು ನಿಜವಾಗಿರುತ್ತದೆಯೋ ಅದನ್ನು ಸ್ವೀಕರಿಸುವ ಮನೋಭಾವ ಬಹಳ ಮುಖ್ಯ.ಸಿಹಿ ಕಹಿ ಎರಡೂ ಬದುಕಿಗೆ ಬಹಳ ಮುಖ್ಯ.


ಅನ್ಯರ ಮೆಚ್ಚಿಸಿ ಬದುಕಲಾದಿತೇ ಈ ಜಗದಲ್ಲಿ?ಎಲ್ಲರು ಮೆಚ್ಚುವ ವಸ್ತು ಜಗದಲ್ಲಿ ಬಹಳ ವಿರಳ.ಆದ್ದರಿಂದ  ಈ ಜಗದಲ್ಲಿ ಇತರರು ಮೆಚ್ಚಬೇಕೆಂಬ ಮನಸ್ಥಿತಿಯಿಂದ ಕೆಲಸ ಮಾಡಿ ಗೆಲ್ಲಲು ಸಾಧ್ಯವಿಲ್ಲ. ನಾವು ಮಾಡುವ ಕೆಲಸಗಳು ನಮಗೆ ಮನತೃಪ್ತಿ ನಿಡಿದರೆ ಸಾಕು.ನಿಜವೇನಂದರೆ ಈ ಜಗದಲ್ಲಿ ನಮಗಾತ್ಮೀಯವಾದದು ನಮ್ಮಆತ್ಮವೊಂದೆ.ಅದರ ಮೇಲೆ ವಿಶ್ವಾಸವಿಟ್ಟರೆ ಅದೇ ಆತ್ಮವಿಶ್ವಾಸ. ಇತರರ ಮೆಚ್ಚಿಸಲು ಆತ್ಮಕ್ಕೆ ದ್ರೋಹ ಬಗೆದರೆ ಅದು ಆತ್ಮದ್ರೋಹ.ಆತ್ಮವಿಶ್ವಾಸದಿಂದ  ಆತ್ಮದ್ರೋಹ ಮಾಡದೆ ನಮಗೆ ಬೇಕಾದ ಹಾಗೆ ಇತರರಿಗೆ ತೊಂದರೆಯಾಗದಂತೆ ಬದುಕುವುದು ನಿಜವಾದ ಜೀವನವಲ್ಲವೇ? ನಮ್ಮ  ಕೆಲಸ ಮುಗಿದ ಮೇಲೆ ಫಲಿತಾಂಶಕ್ಕೆ ಮನಸಾಕ್ಷಿಯ ಮೊರೆ ಹೋದರೆ ಸಾಕು.ಇನ್ನುಳಿದವು  ಭಗವಂತ ಶ್ರೀಕೃಷ್ಣ ನ ಮಾತಿನಂತೆ ಕರ್ಮಣ್ಯೇ ವಧಿಕಾರಸ್ತೇ ಮಾ ಫಲೇಷು ಕದಾಚನ"


ಪ್ರತಿಯೊಂದು ವಿಚಾರಕ್ಕೂ ಜಗದಲ್ಲಿ  ಪರ ವಿರೋಧ  ಎರಡೂ ಇದೆ. ಎರಡೂ ಕೂಡ ವಿಚಾರವನ್ನು ಅವರು ನೋಡುವ ದೃಷ್ಟಿಕೋನದ ಮೇಲೆ ಅವಲಂಭಿತವಾಗಿರುತ್ತದೆ. ವಿಚಾರಗಳು ವಿಮರ್ಶೆಗೆ ಒಳಪಟ್ಟಾಗಲೆ ಅದರ ಮೌಲ್ಯ  ಹೆಚ್ಚವುದು.ಪರ ಹಾಗೂ ವಿರೋಧದ ನಡುವೆ ಯಾವುದು ಸದೃಡ ಹಾಗೂ ಸತ್ಯವಾಗಿದೆಯೊ ಅದೆ ಗೆಲುವು ಕಾಣುವುದು.ತಪ್ಪಾಗಿದ್ದರೆ ಸರಿಪಡಿಸಿಕೊಳ್ಳೋಣ.ಸರಿಯಾಗಿದ್ದರೆ ಮುನ್ನಡೆಯೋಣ.ಇಲ್ಲಿ ಅನ್ಯರು ಮೆಚ್ಚಲಿಲ್ಲ ಎಂಬ ವಿಚಾರಕ್ಕೆ ಚಿಂತಿಸಿ ಚಿತೆಗೆ ಹಾರುವುದು ಮೂರ್ಖತನ. ಇಲ್ಲಿ ನಮ್ಮ ವಿಚಾರಗಳು ಅನ್ಯರನ್ನು ಮೆಚ್ಚುಸುವಂತಿಲ್ಲವಾದರೂ ಪರವಾಗಿಲ್ಲ.ಆದರೆ, ಇತರರ ಬದುಕನ್ನು ಚುಚ್ಚುವಂತೆ ಇರಬಾರದು. ಇದು ಮಾತ್ರ ಇಲ್ಲಿ ಬಹಳ ಮುಖ್ಯ.
ನಮ್ಮ ಬದುಕಿನಲ್ಲಿ ಬರುವವರೆಲ್ಲರೂ ಕೂಡ ಕೇವಲ ಪಕ್ಕದಲ್ಲಿ ಚಲಿಸುವ ಸಮಾನಾಂತರ  ರೇಖೆಗಳಷ್ಟೆ.ಜೊತೆಯಾಗಿ ಸಾಗಬಲ್ಲೆವು,ಆದರೆ ಯಾರು ನಮ್ಮ  ಬದುಕಿನ ಪಾತ್ರ  ಹಾಗೂ ಜವಾಬ್ದಾರಿಯನ್ನು ನಿರ್ವಾಹಿಸಲಾರರು.ಈ ಜಗದಲ್ಲಿ ಪ್ರತಿಯೊಬ್ಬನ ಪಾತ್ರಕ್ಕೂ ಅದರದೇ ಆದ ಮಹತ್ವ  ಇದೆ.ಆ ಮೌಲ್ಯವನ್ನು ಮೊದಲು ನಾವು ತಿಳಿಯಬೇಕು.ಹೌದು. ಮೊದಲು ನಮ್ಮನು ನಾವು ಗೌರವಿಸಬೇಕು.ಅದೇ ಆತ್ಮಗೌರವ.ನಮ್ಮ  ಬದುಕು ನಮ್ಮ ಹೆಮ್ಮೆ.ನಮ್ಮ ಜೀವನ ಪಾತ್ರವನ್ನು ನಾವು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಬದುಕುವುದು ನಮ್ಮ ಜಾಣತನ.ಅವರಿವರ ಚಿಂತೆ ಬಿಟ್ಟು ಮೊದಲು ನಮ್ಮ ಬಗ್ಗೆ ನಾವು ತಿಳಿದುಕೊಳ್ಳೋಣ.ಇಲ್ಲವಾದಲ್ಲಿ ನಮ್ಮ ಬಗ್ಗೆ ಅನ್ಯರು ಹೇಳಿದನ್ನೆ ನಂಬಿ ಅದನ್ನೇ ಬದುಕಾಗಿಸಿ ಕೊನೆಗೆ ಕೊರಗಿ ಕರಗಬೇಕಾಗುತ್ತದೆ.


ಈ ಜಗದಲ್ಲಿ ಹಲವರು ಇತರರು ಕೂಡ ಅವರ ಮೂಗಿನ ನೇರಕ್ಕೆ ಬದುಕಬೇಕೆಂಬ ನಿಲುವನ್ನು ಹೊಂದಿರುತ್ತಾರೆ.ಆದರೆ ಅವರು ಮಾತ್ರ  ಅವರಿಚ್ಛೆಯಂತೆ ಬದುಕುತಿರುತ್ತಾರೆ.ಯಾವಾಗ ನಾವು ಅವರ ಮಾತಿಗೆ ವಿರುದ್ಧವಾಗಿ  ಬದುಕಲು ಶುರುಮಾಡುತ್ತೇವೆಯೋ ಆ ಕ್ಷಣದಿಂದ ನಾವು ಕೆಟ್ಟವರಾಗಲು ಶುರುವಾಗುತ್ತೇವೆ.ಬದುಕು ನಮ್ಮದು.ಇದರ ಲಾಭ ನಷ್ಟಕ್ಕೆ ನಾವೇ ಹೂಣೆ. ಆದರೆ ಕೆಲವರ ಬದುಕು  ನಮ್ಮ ಮೇಲೆ ಅವಲಂಭಿತವಾಗಿದ್ದು ಅವರು ಅದರಲ್ಲಿ ಒಂದು  ಆರಾಮವಲಯವನ್ನು ಸೃಷ್ಟಿಸಿಕೊಂಡಿರುತ್ತಾರೆ.ಆ ಆರಾಮವಲಯಕ್ಕೆ ಕುತ್ತು ಬಂದಾಗ  ಅವರು ಸಿಡಿದೇಳುವುದು ಸರ್ವೆಸಾಮಾನ್ಯ. ಇಂಥವರಿಗಂಜಿ ಬಹುತೇಕರು ಇತರರನ್ನು ಮೆಚ್ಚಿಸಿ ಬದುಕಲು ಪ್ರಯತ್ನ  ಪಡುತ್ತಲೆ ಇರುತ್ತಾರೆ.ಕೊನೆಗೆ ಒಂದು ದಿನ ಈ ಪ್ರಯತ್ನದಲ್ಲಿ ಸೋಲುತ್ತಾರೆ.ಜಗದಲ್ಲಿ ಎಲ್ಲರೂ ಅವರದೆ ಆದ ಇಷ್ಟ ಕಷ್ಟಗಳನ್ನು  ಹೊಂದಿರುತ್ತಾರೆ.ಬೇರೇಯವರ ಇಷ್ಟ ಕಷ್ಟಗಳನ್ನು  ನಾವು ಒಪ್ಪಬೇಕೆಂಬ ನಿಯಮಗಳೇನು ಇಲ್ಲ.ಹಾಗೆಯೇ ನಮ್ಮ ಇಷ್ಟ ಕಷ್ಟಗಳನ್ನು ಬೇರೆಯವರು ಒಪ್ಪಬೇಕೆಂಬ ನಿಯಮಗಳಿಲ್ಲ.ಎಲ್ಲರ ಬದುಕು ಅವರವರ ಆಯ್ಕೆ.ಇಲ್ಲಿ  ಪರಸ್ಪರ ಗೌರವ ಮುಖ್ಯ .
ಸಮಾಜದಲ್ಲಿ ನಾವು ಬದುಕುವಾಗ ಸಾಮಾಜಿಕ  ಶಿಸ್ತನ್ನು ಕಾಪಾಡುವ ದೃಷ್ಟಿಯಿಂದ  ಕೆಲವೊಂದು ಕಟ್ಟುಪಾಡುಗಳನ್ನು ಪಾಲಿಸಬೇಕಾಗುತ್ತದೆ.ಅವುಗಳು ಸರಿಯಾಗಿದಲ್ಲಿ ಅದೆಷ್ಟೇ ಕಷ್ಟವಾಗಿದ್ದರೂ ಅವುಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯ.ಆದರೆ ಆ ಕಟ್ಟು ಪಾಡುಗಳು ಕೇವಲ ಕೆಲವರ ಭ್ರಮೆಯ ದೃಷ್ಟಿಕೋನವಾದಲ್ಲಿ ಅದನ್ನ ತಿರಸ್ಕಾರ ಮಾಡಲು ಹಿಂಜರಿಯಬಾರದು. ಅದಕ್ಕಾಗಿ ನಮ್ಮ ಬದುಕನ್ನು ಅನ್ಯರ ಕೈಗೂಪ್ಪಿಸಿ ಹರಕೆಯ ಕುರಿಯಾಗೋ ಅನಿವಾರ್ಯತೆ ಇಲ್ಲ.ನಮಗೆ ಬದುಕಲು ಅನ್ಯರ ಸಲಹೆಗಳು ಬೇಕು.ಆದರೆ ನಿರ್ಧಾರ  ಮಾತ್ರ  ನಮ್ಮದಾಗಿರಬೇಕು.ಅದಕ್ಕಾಗಿನೇ ಭಗವಂತ  ಎಲ್ಲರಿಗೂ ಬುದ್ದಿಯನ್ನು ಕೊಟ್ಟಿರುವುದು. ಇಲ್ಲಿ ಬುದ್ಧಿ ಇದೆಯೋ ಇಲ್ಲವೋ ಎನ್ನುವುದು ವಿಚಾರವಲ್ಲ.ಬುದ್ದಿಯನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ನಮ್ಮದೆ.ಫಲಿತಾಂಶ ಬದುಕು ನಮ್ಮ ಹೆಮ್ಮೆ.ನಾವು ನಾವಾಗಿರೋಣ.ನಮ್ಮ ಬದುಕಿನ ಪಾತ್ರಕ್ಕೆ ನ್ಯಾಯ ಒದಗಿಸುವುದಷ್ಟೆ ನಮ್ಮ ಕರ್ತವ್ಯ .ಯಾಕೆಂದರೆ  ಯಾರ ಮೆಚ್ಚಿಸಿ ಬದುಕ ಹೋದರೂ ಕೊನೆಗೆ ಮೆಚ್ಚಬೇಕಾಗಿರುವವನು ಭಗವಂತನೊಬ್ಬನೆ.


*****************************************

Beyond the Dark Nights


Between Me and the World


Should I lie and be happy? Should I tell the truth and be bitter? Should I hide behind the gossip of others? Should I try to please the world by hiding my true self and putting on a mask? Or should I ignore what my conscience says and just trust my soulmate? These confusions are common in everyone's life. Because we live with society. Whatever we do here, praise and criticism are two things. As long as we live with our situation and adapt to various moods, life becomes a blur. Praise is everyone's favorite companion. But if we see criticism, we run far away. But here, the attitude of accepting what is true is very important. Both sweet and bitter are very important for life.

Is it possible to live in this world by pleasing others? Things that everyone admires are very rare in the world. Therefore, we cannot win in this world by working for the admiration of others. It is enough if the work we do gives us satisfaction. The truth is that the only thing that is spiritual to us in this world is our own soul. If we trust in it, that is self-confidence. If we betray our soul to please others, that is self-betrayal. Isn't true life to live as we want without betraying ourselves with self-confidence and without causing trouble to others? After our work is done, it is enough to go to our conscience for the result. As Lord Krishna said, this is the authority of action .

Every idea has its pros and cons in the world. Both depend on the perspective from which they see the idea. Ideas only increase in value when they are subjected to criticism. Between the pros and cons, the one that is strong and true will win. If we are wrong, let us correct ourselves. If we are right, let us move forward. It is foolish to worry about the fact that others do not like the idea and jump into the fire. But even if our ideas may not please others, they should not be so intrusive in the lives of others. This is the only thing that is very important.


Everyone who comes into our lives is just a parallel line. We can walk together, but no one can fulfill the role and responsibility of our life. Everyone's role in this world has its own importance. We must first know that value. Yes. First, we must respect ourselves. That is self-respect. Our life is our pride. It is our wisdom to understand our life role and live accordingly. Let us stop worrying about them and first know about ourselves. Otherwise, we will have to believe what others say about us and live by that, and in the end, we will have to cry and melt away.

Many people in this world have the attitude that others should live right under their noses. But they are the only ones who live according to their wishes. When we start living against their wishes, from that moment we start becoming bad. Life is ours. We are responsible for its profit and loss. But some people's lives depend on us and they have created a comfort zone in it. When that comfort zone is disturbed, it is common for them to explode. Most of these people keep trying to live by pleasing others. In the end, they fail in this attempt. Everyone in the world has their own likes and dislikes. There are no rules that say we have to accept other people's dislikes. Similarly, there are no rules that say others have to accept our likes and dislikes. Everyone's life is their own choice. Mutual respect is important here.


Many individuals in our society believe that others should conform to their preferences. However, they themselves are the only ones living according to their desires. The moment we begin to act contrary to their expectations, we are often judged negatively. Our lives belong to us, and we are accountable for both the gains and losses we experience. Yet, some people's well-being is intertwined with ours, and they often find comfort in this dependency. When their comfort is disrupted, it's not uncommon for them to react strongly. Many of these individuals strive to please others, but ultimately, such efforts generally lead to failure. Each person has their own tastes and dislikes, 

When we live in society, we have to follow certain rules to maintain social discipline. It is inevitable to accept them. For that, there is no need to put our lives in the hands of others and become a sheep for sacrifice. We need the advice of others to live. But the decision should be ours. That is why God has given everyone intelligence. It is not a question of whether there is intelligence or not. How we use intelligence is very important. It is ours. The result of life is our pride. Let us be ourselves. Our duty is to do justice to the role of our life. Because no matter who we live to please, in the end, the only one who has to be pleased is God.


Living in society requires us to adhere to certain rules for maintaining social order, and accepting these guidelines is essential. However, it is not necessary to relinquish control of our lives to others or become submissive. While we may seek guidance from those around us, the ultimate decisions should remain with us. This ability to make choices is why everyone has been endowed with intelligence. The issue is not whether we possess intelligence, but rather how we choose to apply it. It belongs to us, and the outcomes of our lives reflect our achievements. We should embrace our individuality and fulfill the responsibilities that come with our existence. Ultimately, regardless of whom we seek to satisfy, the only one we must truly seek to please is God.


PNRai...




Comments