Posts

Showing posts from June, 2026

ಬದುಕ ತೆರೆಯ ಹಿಂದಿನ ಕಥೆಯ ವ್ಯಥೆಗಳು.

Image
  ಈ ಜಗತ್ತು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಹಲವಾರು ಕಥೆಗಳನ್ನು ಹೇಳುತ್ತೆ. ಅವಳು ಹಾಗಂತೆ, ಅವನು ಹೀಗಂತೆ, ಕೆಲವೊಬ್ಬರಿಗೆ ಅಯ್ಯೋ ಅನ್ನುತ್ತೆ, ಇನ್ನೂ ಕೆಲವರನ್ನು ಗೇಲಿ ಮಾಡುತ್ತದೆ. ಮತ್ತೆ ಕೆಲವರನ್ನು ಟೀಕೆ ಮಾಡುತ್ತದೆ. ಹಾಗೆಯೇ ಕೆಲವೊಬ್ಬರ ಕಥೆಗಳನ್ನು ಹಾಸ್ಯ ಕೂಡ ಮಾಡುತ್ತದೆ. ಇದು ಜಗದ ನಿಯಮ, ಜನರ ನಿಯಮ. ಬದಲಾಯಿಸಲಾಗದಂತಹ ಒಂದು ವಿಷಯ.ಇದು ಕೇವಲ ಜಗದ ಊಹೆಯ ಪ್ರಕಾರ ಯಾರದೋ ಒಬ್ಬರ ಬದುಕು.ಇಂತಹ ಗಾಳಿಸುದ್ದಿಗಳು ಸದ್ದು ಮಾಡುವಾಗ ಪ್ರತಿ ಮನೆಯ ಗೋಡೆಗೂ ಕಿವಿಯಿರುತ್ತದೆ. ಯಾಕೆಂದರೆ ಊಹಾ ಪೋಹಗಳು ನೖಜ್ಯತೆಗಿಂತ ಬಹಳ ಸುಂದರವಾಗಿರುತ್ತದೆ.ಆದರೆ ನಿಜವೇನೆಂದರೆ ಬದುಕು ಯಾರಿಗೂ ಸುಲಭ ಇಲ್ಲ ಇಲ್ಲಿ. ಬದುಕಿನ ಕಷ್ಟಗಳ ಬಿಗಿ ಎಲ್ಲರಿಗೂ ಉರುಳಾಗಿ ಉಸಿರ ಬಿಗಿಯುತಿರುತ್ತದೆ. ಇಲ್ಲಿ ಯಾರ ಬದುಕು ಕೂಡ ನಾವು ಊಹಿದಷ್ಟು ಸುಲಭವಾಗಿಲ್ಲ. ಆದರೆ ಇವೆಲ್ಲವನ್ನು ಬಿಟ್ಟು ಪ್ರತಿಯೊಬ್ಬನಿಗೂ ಒಂದು ಬದುಕಿನ ಕಥೆ ಇರುತ್ತದೆ. ಆ ಕಥೆಯಲ್ಲಿ ಈ ಕಟ್ಟುಕಥೆಯ ತರಹ ವ್ಯಂಗ್ಯ, ಹಾಸ್ಯ, ಟೀಕೆ, ಇದ್ಯಾವುದು ಇರುವುದಿಲ್ಲ. ಒಂದಿಷ್ಟು ಖುಷಿಯ ವಿಚಾರಗಳು ಹಾಗೆಯೇ ಒಂದಷ್ಟು ಕಹಿಯ ನೋವುಗಳು ಅಷ್ಟೇ.. ಇವುಗಳನ್ನು ಆಲಿಸುವವರು ಬಹಳ ಕಡಿಮೆ. ಮೊದಲಿಗೆ ಕೆಲವರು ಕೇಳಬಹುದು. ನಂತರ ಈ ವಿಚಾರಗಳು ಸಪ್ಪೆ ಮತ್ತು ಬೇಸರವೆನಿಸುತ್ತದೆ. ಯಾಕೆಂದರೆ ಈ ಜಗತ್ತು ಮನರಂಜನೆಯನ್ನು ಬಯಸುತ್ತದೆ ಹೊರತು ಸತ್ಯವನ್ನಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬನ ಮನುಷ್ಯನ ಬದುಕು ಕ್ಷಣ...
Image
ನಾವು ಈ ಜಗದಲ್ಲಿ ಯಾರನ್ನೇ ಭೇಟಿಯಾಗಲಿ ಪ್ರತಿ ಜೀವ ಒಂದೊಂದು ನೋವಿನ ಕಥೆಯನ್ನು ಹೇಳುತ್ತದೆ. ಪರರಿಂದ ತನಗಾದ ಅನ್ಯಾಯ, ಕಠಿಣ ಪರಿಸ್ಥಿತಿಯಲ್ಲಿ ತನ್ನನ್ನು ತಾನು ಸದೃಢಗೊಳಿಸಿಕೊಂಡು ಅದನ್ನು ನಿಭಾಯಿಸಿದ ರೀತಿ, ತಮ್ಮ ಭಯಾನಕ ಅನುಭವಗಳು, ಹೀಗೆ ಹತ್ತು ಹಲವಾರು ಭಾವನಾತ್ಮಕವಾದ ಅನುಭವ ಕಥೆಗಳನ್ನು ಕೇಳುತ್ತೇವೆ.ಪ್ರತಿಯೊಬ್ಬರ ಕಥೆಯಲ್ಲೂ ನ್ಯಾಯ ಅವರ ಪರವಿರುತ್ತದೆ. ಅನ್ಯಾಯ ಇತರರಿಂದ ಆಗಿರುತ್ತದೆ. ಆದರೆ ಇಬ್ಬರ ಕಥೆ ಕೇಳಿ ಇಬ್ಬರನ್ನ ಎದುರು ಬದುರು ನಿಲ್ಲಿಸಿ ಕೇಳಿದರೆ ಅಲ್ಲಿ ಕಥೆಯೆ ಬೇರೆ ಇರುತ್ತದೆ. ಇಲ್ಲಿ ಪ್ರತಿ ಘಟನೆಯಲ್ಲೂ ಮನುಷ್ಯ ತನ್ನ ಒಳ್ಳೆಯತನವನ್ನು ತೋರಿಸಲು ಬಯಸುತ್ತಾನೆ ಹೊರತು ತಪ್ಪನಲ್ಲ. ಇದು ಮನುಷ್ಯ ಸಹಜ ಗುಣ. ಯಾಕೆಂದರೆ ಈ ಜಗತ್ತು ಬೇರೆಯವರ ತಪ್ಪು ಕಂಡರೆ ಸಾಕು, ಅವರ ಬದುಕನ್ನು ಹುರಿದು ಹಿಂಸೆ ಮಾಡುತ್ತದೆ.  ಇಂತಹ ಕಥೆಗಳುಈ ಜಗತ್ತಿನಲ್ಲಿ ಪ್ರತಿಯೊಬ್ಬರ ಬದುಕಲ್ಲೂ ಒಂದೊಂದು ಇರುತ್ತದೆ. ಇಲ್ಲಿ ಒಂದು ಕುತೂಹಲಕರವಾದ ವಿಚಾರವೆಂದರೆ ಇಲ್ಲಿ ನಮ್ಮ ಬದುಕಿನ ಕಥೆಗೆ ನಾವೇ ಹೀರೋಗಳು. ನಮ್ಮ ಪ್ರಕಾರ ನಾವೇ ಒಳ್ಳೆಯವರು. ಕೇಡು ಹಾನಿಗಳು ನಮಗೆ ಇತರರಿಂದ ಆಗಿರುತ್ತದೆ ಹೊರತು ಅಲ್ಲಿ ನಮ್ಮ ತಪ್ಪುಗಳು ಏನು ಇರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ.ಆದರೆ ನಿಜವಾಗಿ ನೋಡಿದರೆ ಬಹಳಷ್ಟು ಸಲ ತಪ್ಪುಗಳು ಎರಡೂ ಕಡೆ ಇರುತ್ತದೆ. ಆದರೆ ನಾವು ಒಪ್ಪಲು ಸಿದ್ದವಿರುವುದಿಲ್ಲ. ಕಾರಣ ಸಮಾಜದ ಭಯ. ನಾವು ಒಂದು ಘಟನೆ ನಡೆದಾಗ ಅಥವಾ ...

ಇರುವುದೆಲ್ಲವ ಬಿಟ್ಟು....

Image
    "ಏನೆಂದೂ ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ" ಮನುಷ್ಯನ ಬದುಕಿನಲ್ಲಿ ಆಸೆಯು ಎಂದಿಗೂ ನಿಲ್ಲದ ಒಂದು ನಿರಂತರ ಪ್ರಕ್ರಿಯೆ. ಈ ಬಗ್ಗೆ ಡಾ. ರಾಜಕುಮಾರ್ ಅವರು ಹಾಡಿರುವ ಮೇಲಿನ ಸಾಲುಗಳು ಅಕ್ಷರಸ: ಮನಮುಟ್ಟುವವುಗಳು. ಮನುಷ್ಯ ಯಾಕೆ ಹೀಗೆ?ಮನದಲ್ಲಿ ಚಿಗುರಿ ನಿಲ್ಲದೆ ಓಡುವ ಬಯಕೆಗಳ ಹಿಂಬಾಲಿಸಿ ಕೊನೆಗೆ ಬದುಕನ್ನು ಗೋಳಿನ ತಾಣವನ್ನಾಗಿಸಿ ಬದುಕೆಲ್ಲ ನೆಮ್ಮದಿಯ ಅರಸುವ ಮೂರ್ಖನಾಗುತ್ತಾನೆ. ಈ ಜಗತ್ತಿನಲ್ಲಿ ಸರ್ವ ಸುಖವನ್ನು ಅನುಭವಿಸಿ ಸಾಯುವಷ್ಟು ಆಯಸ್ಸು ಯಾರಿಗಿದೆ.? ಮನುಷ್ಯನ ಸೃಷ್ಟಿಯೇ ವಿಭಿನ್ನ.ಈ ಜಗದಲ್ಲಿ ಪ್ರತಿಯೊಬ್ಬನ ಬದುಕಿಗೂ ಒಂದು ಉದ್ದೇಶ ಇದೆ ನಿಜ. ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಕರ್ಮಗಳನ್ನು ಪೂರ್ತಿ ಮಾಡಲು ಭೂಮಿ ಮೇಲೆ ಜನ್ಮ ತಾಳುತ್ತಾನೆ ಅನ್ನುವ ನಂಬಿಕೆಯಿದೆ. ಹಾಗೆಯೇ ಇಲ್ಲಿ ಪ್ರತಿಯೊಬ್ಬನ ಪಾತ್ರವೂ ವಿಭಿನ್ನ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ ಬಹಳಷ್ಟು ಜನ ಬೇರೆಯವರನ್ನು ಅನುಕರಿಸಲು ಹೋಗಿ ತಮ್ಮ ಬದುಕಿನ ವಿಭಿನ್ನತೆಯನ್ನು ಕಳೆದುಕೊಂಡು ತಮ್ಮ ಬದುಕಿನ ಅಂದವನ್ನು ತಾವೇ ಕೆಡಿಸಿಕೊಳ್ಳುತ್ತಾರೆ. ಮನುಷ್ಯನ ಬದುಕು ಈ ಜಗತ್ತಿನಲ್ಲಿ "ವೖವವಿಧ್ಯತೆಯಲ್ಲಿ ಏಕತೆ"ಗೆ ಉತ್ತಮ ಉದಾಹರಣೆ. ಅದೆಷ್ಟು ವಿಶೇಷ ವೖಶಿಷ್ಟ್ಯ ಬದುಕಿನ ಕಥೆಗಳು ಈ ಜಗತ್ತಿನಲ್ಲಿ ಇಂದಿಗೂ ಅದ್ಬುತ ಪ್ರದರ್ಶನಗಳನ್ನು ನೀಡುತ್ತಿದೆ. ಈ ಜಗತ್ತಿನಲ್ಲಿ ಬದುಕುವ ಪ್ರತಿ ಸಾಮಾನ್ಯ ಮನುಷ್ಯನ ಬದುಕಿನಲ್ಲೂ ವಿಭಿನ್ನ ವಿಶೇಷ ...